ಜೆ. ಜೆ. ಎಮ್. ಭೂಮಿ ಪೂಜೆ ಕಾರ್ಯಕ್ರಮ ಸಿಂದಗೇರಿ
LOCAL NEWSCOMMUNITY


ಸಿಂದಗೇರಿ ಐದು ವರ್ಷದ ಅವಧಿಗಾಗಿ ನೀವು ನನಗೆ ಮತ ಕೊಟ್ಟು ಆಯ್ಕೆ ಮಾಡಿ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿ ಕೊಟ್ಟಿದ್ದೀರಿ, ನಿಮ್ಮ ಋಣ ನನ್ನ ಮೇಲಿದೆ. ಆ ದಿಶೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸುವಂತಹ ಕೆಲಸ ಮಾಡುತ್ತೇನೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ್ (ಕುದುರಿ ಸಾಲವಾಡಿಗಿ) ಹೇಳಿದರು. ಹೂವಿನ ಹಿಪ್ಪರಗಿ ಸಮೀಪದ ಸಿಂದಗೇರಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಯೋಗದ ಬಸವನಬಾಗೇವಾಡಿ 2022 23ನೇ ಸಾಲಿನ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೆ ನಳ ಸಂಪರ್ಕ ಯೋಜನೆ ಅಂದಾಜು ಮೊತ್ತ 95 ಲಕ್ಷ ರೂ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುರನಗೌಡ ಪಾಟೀಲ್ ಗುರುಲಿಂಗಪ್ಪ ದೊಡ್ಡಮನಿ ಅಪ್ಪು ಕನ್ನೊಳ್ಳಿ ಊರಿನ ಯುವಕರು ಗ್ರಾಮಸ್ಥರು ಪಾಲ್ಗೊಂಡರು.
#prajadhvaninews #byakod #basavanabagewadi #bijapurnews
Follow Us on Social Media
Subscribe to our YouTube Channel for more updates!
